ಬೆಂಗಳೂರು : ಹೊಸ ವರ್ಷ ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠ ಏಕಾದಶಿ. ಬೆಂಗಳೂರಿನ ದೇವಸ್ಥಾನಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.ಕಳೆದ 2 ವರ್ಷದಿಂದ ಕೊರೊನಾ ಹಿನ್ನೆಲೆ ವೈಕುಂಠ ಏಕಾದಶಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲು ಆಗಿರಲಿಲ್ಲ. ಇದೀಗ ಕೊಂಚ ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ ನಡೆಯಲಿದೆ. ದೇವಾಲಯಗಳಿಗೆ ಸಾವಿರಾರು ಭಕ್ತಾದಿಗಳ ದಂಡೇ ಹರಿದು ಬರಲಿದೆ.ಹೊಸ ವರ್ಷ ಹಿನ್ನೆಲೆ ನಿನ್ನೆ ವೈಯಾಲಿಕಾವಲ್ನ ಟಿಟಿಡಿ ದೇವಸ್ಥಾನಕ್ಕೆ 25 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ರು. ತಿರುಪತಿಯಿಂದ ಲಾಡು