Widgets Magazine

ಕೊರೊನಾ : ದೆಹಲಿ ಮಸೀದಿಗೆ ಹೋದವರ ಖಡಕ್ ತಪಾಸಣೆ

ಬಳ್ಳಾರಿ| Jagadeesh| Last Modified ಬುಧವಾರ, 1 ಏಪ್ರಿಲ್ 2020 (13:40 IST)
ದೆಹಲಿಯ ನಿಜಾಮುದ್ದಿನ್ ಜಮಾತ್ ಮಸೀದಿಯಲ್ಲಿ ಭಾಗಿಯಾದವರನ್ನು ಖಡಕ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ನಿಜಾಮುದ್ದಿನ್ ಜಮಾತ್ ಮಸೀದಿಯಲ್ಲಿ ಮಾ. 10 ರಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಬಳ್ಳಾರಿಯ  12 ಜನ ಪಾಲ್ಗೊಂಡಿದ್ದರು.

 ಹನ್ನೆರಡು ಜನರಲ್ಲಿ ಒಬ್ಬರು  ಸ್ವಯಂ ಪ್ರೇರಣೆಯಿಂದ ಬಂದು ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ.

ಜಿಲ್ಲಾಡಳಿತ ರಾತ್ರಿಯಿಡಿ ಹುಡುಕಾಟ ನಡೆಸಿ,  ಆಸ್ಪತ್ರೆಗೆ  5 ಜನರನ್ನು ಕರೆತಂದಿದ್ದಾರೆ. ಅವರಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಗಿದೆ.

ಇನ್ನೂ 6 ಜನರನ್ನು ಪತ್ತೆ ಹಚ್ಚುತ್ತಿರೋ ಕಾರ್ಯವನ್ನು  ಜಿಲ್ಲಾಡಳಿತ ಮುಂದುವರಿಸಿದೆ.


ಇದರಲ್ಲಿ ಇನ್ನಷ್ಟು ಓದಿ :