ಮಾಜಿ ದೇವದಾಸಿ ಮಹಿಳೆಯರಲ್ಲಿ ಕೊರೋನಾ ವೈರಸ್ (ಕೊವೀಡ್-19) ಕುರಿತು ಜಾಗೃತಿ ಮೂಡಿಸಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಮಾಪೂರತಾಯಿ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೇಂಗಳಿ ಭೇಟಿ ನೀಡಿ, ಮಾಜಿ ದೇವದಾಸಿ ಮಹಿಳೆಯರಲ್ಲಿ ಕೊರೋನಾ ವೈರಸ್ (ಕೊವೀಡ್-19) ಕುರಿತು ಜಾಗೃತಿ ಮೂಡಿಸಿದರು.ಚಿಂಚನಸೂರ ಗ್ರಾಮದ ಮಾಜಿ ದೇವದಾಸಿ ಮಹಿಳೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿ ಹೇಳಿದರು.