ಕೋಳಿ ಕೆರೆಯಲ್ಲಿ ಹೊಸದಾಗಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಧಾರವಾಡದ ಹೊಸಯಲ್ಲಾಪುರದ ನವಲೂರ ಅಗಸಿ ( ಕೋಳಿಕೆರೆ) ಯಲ್ಲಿ ಇಂದು ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.ಕೆಮ್ಮು,ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದು ರಾಜ್ಯದ 705 ನೇ ಪ್ರಕರಣವಾಗಿರುವುದರಿಂದ ಪಿ-705 ಎಂದು ಗುರುತಿಸಲಾಗಿದೆ.ಇದು ಧಾರವಾಡ ಜಿಲ್ಲೆಯ 12 ನೇ ಪ್ರಕರಣವಾಗಿದೆ. ಈಗಾಗಲೇ 6 ಜನ