ಕೊರೊನಾ ವೈರಸ್ ಸೋಂಕಿತ ದೆಹಲಿಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಲಿಂಕ್ ಮಂಡ್ಯ ಜಿಲ್ಲೆಯೊಂದಿಗೆ ಹರಡಿಕೊಂಡಿದ್ದು, ಇದೀಗ ಆ ಮೂಲಕ ಕೊರೊನಾ ವೈರಸ್ ವಕ್ಕರಿಸಿದೆ. ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಐವರು ಧರ್ಮಗುರುಗಳ ಸಂಪರ್ಕದಲ್ಲಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿಯ ಮೂವರು ವ್ಯಕ್ತಿಗಳಿಗೆ ಕೊರೊನಾ ವೈರಸ್ ಹರಡಿರುವುದು ದೃಢಪಟ್ಟಿದೆ. ಮೂವರೂ ಸೋಂಕಿತರಿಗೂ ಮಂಡ್ಯ ಮಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಪೀಡಿತ ಸಂಖ್ಯೆ 134, 135, 136, 137 ಮತ್ತು 138 ವ್ಯಕ್ತಿಗಳೊಂದಿಗೆ ಈ ಮೂವರು