ಜಗತ್ತಿನ ಜನರಿಗೆ ಕಂಟಕವಾಗುತ್ತಿರುವ ಕೊರೊನಾ ವೈರಸ್ ನಿಗ್ರಹಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ದೇಣಿಗೆ ನೀಡಿದ್ದಾರೆ. ಕೋವಿಡ್ – 19 ತಡೆಗಟ್ಟಲು ಕೈಗೊಳ್ಳುವ ಕ್ರಮಗಳಿಗಾಗಿ ತಮ್ಮ ಒಂದು ವರ್ಷದ ವೇತನವನ್ನು ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸಿಎಂ ಅವರ ಒಂದು ವರ್ಷದ ವೇತನ 24 ಲಕ್ಷ ರೂ.ಗಳಾಗುತ್ತವೆ. ಅದನ್ನು ದೇಣಿಗೆಯಾಗಿ ನೀಡಿದ್ದಾರೆ. ಸಚಿವರು, ಶಾಸಕರು ತಮ್ಮ ಕೈಲಾದ ದೇಣಿಗೆಯನ್ನು ನೀಡಿ ಮಹಾಮಾರಿ ಕೊರೊನಾ ವೈರಸ್ ಹೊಡೆದೊಡಿಸುವ ಕಾರ್ಯದಲ್ಲಿ ಕೈಜೋಡಿಸಬೇಕು