ಬೆಂಗಳೂರು : ಚೀನಾದಲ್ಲಿ ಮಾರಣಹೋಮ ನಡೆಸಿದ ಕೊರನಾ ವೈರಸ್ ಇದೀಗ ಭಾರತಕ್ಕೆ ಕಾಲಿಟ್ಟಿದ್ದು, ಈಗಾಗಲೇ ಒಂದು ಬಲಿ ತೆಗೆದುಕೊಂಡಿದೆ. ಈಗಾಗಲೇ ಕರ್ನಾಟಕದಲ್ಲಿ 5 ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, 1 ಸಾವು ಕೂಡ ಸಂಭವಿಸಿದೆ. ಇದೀಗ ಬೆಂಗಳೂರಿನ ಗೂಗಲ್ ಕಂಪೆನಿಯ ಸಿಬ್ಬಂದಿಗೂ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಆದಕಾರಣ ಬೆಂಗಳೂರಿನಲ್ಲಿರೋ ಗೂಗಲ್ ಇಂಡಿಯಾ ಕಂಪೆನಿ ತನ್ನ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಗೆ ಸೂಚಿಸಿದೆ ಎಂಬುದಾಗಿ ತಿಳಿದುಬಂದಿದೆ.