ಗದಗ ಜಿಲ್ಲೆಯ ಯುವಕನಲ್ಲಿ ಕೊರೊನಾ ವೈರಸ್ ಶಂಕೆ

ಗದಗ| Jagadeesh| Last Modified ಬುಧವಾರ, 18 ಮಾರ್ಚ್ 2020 (18:29 IST)
ಜಿಲ್ಲೆಯ ಯುವಕನೊಬ್ಬನಲ್ಲಿ ಕೊರೊನಾ ವೈರಸ್ ಶಂಕೆ ವ್ಯಕ್ತವಾಗಿದೆ.

ಕೊರೊನಾ (ಕೋವಿಡ್ - 19) ವೈರಸ್ ಸಂಬಂಧಿಸಿದಂತೆ ಕಲಬುರ್ಗಿ ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂಲತಃ  ಅಣ್ಣಿಗೇರಿ ಗ್ರಾಮದ 20 ವರ್ಷದ ಯುವಕನಲ್ಲಿ ಲಕ್ಷಣಗಳು ಗೋಚರಿಸಿವೆ.

ಕಲಬುರಗಿಯಿಂದ ಗದಗಕ್ಕೆ ಬಂದಾಗ ಕೆಮ್ಮು, ಜ್ವರದ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ಶಂಕೆಯ ಮೇರೆಗೆ ಯುವಕನ್ನು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಿಸಲಾಗಿದೆ.

ಮಾದರಿಗಳನ್ನು ವರದಿಗಾಗಿ ಕಳುಹಿಸಿ ಕೊಡಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :