ಬೆಂಗಳೂರು : ಕಳಪೆ ಗುಣಮಟ್ಟದ ಸ್ಯಾನಿಟೈಸರ್ ಖರೀದಿಸುವ ಮೂಲಕ ಸರಕಾರ ಕೋವಿಡ್ ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಾಂಬ್ ಸಿಡಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಅವರು, ಆರೋಗ್ಯ ಇಲಾಖೆ 9.66 ಕೋಟಿ ಮೌಲ್ಯದ ಸ್ಯಾನಿಟೈಸರ್ ಖರೀದಿಸಿದೆ. ಇದು ಕೆಲವೇ ದಿನಗಳಲ್ಲಿ ಕೊಳಚೆ ನೀರಿನಂತೆ ಕಾಣುತ್ತದೆ ಎಂದು ಸ್ಯಾನಿಟೈಸರ್ ಬಾಟೆಲ್ ಪ್ರದರ್ಶಿಸುವ ಮೂಲಕ ಗಂಭೀರ ಆರೋಪ ಮಾಡಿದರು. ಡ್ರಗ್ಸ್ ಕಂಟ್ರೋಲ್ ಸ್ಯಾನಿಟೈಸರ್ ಅನ್ನು