ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಇಂದು ಸಂಜೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಅಪ್ಲಿಕೇಶನ್ ಬಿಡುಗಡೆ ಮಾಡಲಿದ್ದು, ಸಂಜೆಯಿಂದ ಅರ್ಜಿ ಸ್ವೀಕಾರ ಆರಂಭ ಆಗಲಿದೆ. ಈ ನೋಂದಣಿಯನ್ನು ಮಹಿಳೆಯರೇ ಮಾಡಲು ಸಾಧ್ಯವಿಲ್ಲ. ಸರ್ಕಾರ ನಿಗದಿ ಮಾಡಿದ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಯಾವಾಗ ಎಂದು ಸರ್ಕಾರವೇ ತಿಳಿಸುತ್ತದೆ. ಜೊತೆಗೆ ಈ ನೋಂದಣಿಗೆ ಯಾವುದೇ ಶುಲ್ಕವಿಲ್ಲ. ಅರ್ಜಿ ಸಲ್ಲಿಸಲು ಡೆಡ್ಲೈನ್ ಕೂಡ