ಬಹುದಿನಗಳಿಂದ ನಾಡಿನ ಜನರು ಕಾದು ಕುಳಿತಿದ್ದ ಹಾಗೂ ರೈತರು ನಿರೀಕ್ಷೆ ಮಾಡುತ್ತಿದ್ದ ಮುಂಗಾರು ಕಾಲಿಡಲು ಕ್ಷಣಗಣನೆ ಆರಂಭಗೊಂಡಿದೆ.ನಿರೀಕ್ಷೆಯಂತೆ ಮುಂಗಾರು ಮಳೆ ಕೇರಳದ ಕರಾವಳಿ ಪ್ರದೇಶಕ್ಕೆ ಇಂದು ಅಪ್ಪಳಿಸಿದೆ. ಕರ್ನಾಟಕಕ್ಕೆ ಜೂನ್ 9ರಂದು ಪ್ರವೇಶ ಮಾಡುವ ಮುನ್ಸೂಚನೆ ನೀಡಿದೆ.ಪ್ರತಿ ವರ್ಷದ ಸಂಪ್ರದಾಯದಂತೆ ಒಂದು ವಾರದ ಮೊದಲೇ ಮುಂಗಾರು ರಾಜ್ಯವನ್ನು ಪ್ರವೇಶ ಮಾಡಬೇಕಿತ್ತು. ಈ ಬಾರಿ ಒಂದು ವಾರ ತಡವಾಗಿದೆ. ವಿಳಂಬವಾದರೂ ಕೇರಳದಲ್ಲಿ ಮುಂಗಾರು ಬಿದ್ದಿದೆ. ಇದರೊಂದಿಗೆ ದೇಶದ ಮೊದಲು ಮುಂಗಾರು ಹಂಗಾಮು