ಲೋಕಸಮರದಲ್ಲಿ ಅಭೂತಪೂರ್ವ ವಿಜಯದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. ಏತನ್ಮಧ್ಯೆ, ಜೂನ್ 17ರಿಂದ ಸಂಸತ್ ಅಧಿವೇಶನ ಆರಂಭಗೊಳ್ಳಲಿದೆ.ಸಂಸತ್ ನಲ್ಲಿ ಮಹತ್ವದ ಅಧಿವೇಶನ ಆರಂಭಗೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಆದರೆ ಸರಕಾರದ ವೈಫಲ್ಯಗಳ ವಿರುದ್ಧ ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಇದುವರೆಗೂ ಅಗತ್ಯ ಸಿದ್ಧತೆ ಮತ್ತು ಒಗ್ಗಟ್ಟಿನ ಮಂತ್ರ ಜಪಿಸಿಲ್ಲ. ಹೀಗಾಗಿ ಮೋದಿ ನಡೆದದ್ದೇ ದಾರಿ ಎನ್ನುವಂತೆ ಅಧಿವೇಶನ ಆಗಲಿದೆ ಎನ್ನುವ ಚರ್ಚೆಗಳು ಶುರುವಾಗಿವೆ.ಚುನಾವಣೆ ಮೊದಲೇ ಎನ್ ಡಿ