ಮದುವೆಗೆ ಮನೆಯವರ ವಿರೋಧ; ನವದಂಪತಿಗಳು ನೇಣಿಗೆ ಶರಣು

ಬೆಂಗಳೂರು| pavithra| Last Modified ಭಾನುವಾರ, 30 ಮೇ 2021 (09:08 IST)
ಬೆಂಗಳೂರು: ಪ್ರೀತಿಸಿ ಮದುವೆಯಾದ ಜೋಡಿಯೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೇರೋಹಳ್ಳಿಯಲ್ಲಿ ನಡೆದಿದೆ.

ಹರ್ಷಿತಾ ಹಾಗೂ ಪುನೀತ್ ಇಬ್ಬರೂ ಪ್ರೀತಿಸುತ್ತಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆಯಿರಲಿಲ್ಲ. ಮನೆಯವರ ಬೆದರಿಕೆಗೆ ಬೇಸತ್ತು ಹರ್ಷಿತಾ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಸ್ಪತ್ರೆಗೆ ಸಾಗಿಸುವಾಗ ಹರ್ಷಿತಾ ಸಾವನ್ನಪ್ಪಿದ್ದಳು.

ಇದರಿಂದ ಮನನೊಂದ ಪತಿ ಪುನೀತ್ ಮನೆಗೆ ಬಂದು ತಾನು ಕೂಡ ನೇಣಿಗೆ ಕೊರಳೊಡ್ಡಿದ್ದಾನೆ. ಪ್ರಕರಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ

ಇದರಲ್ಲಿ ಇನ್ನಷ್ಟು ಓದಿ :