ಮೈಸೂರು: ಇತ್ತೀಚೆಗಿನ ದಿನಗಳಲ್ಲಿ ಪ್ರಿವೆಡ್ಡಿಂಗ್ ಶೂಟ್ ಅನ್ನು ವಿಶೇಷವಾಗಿ ಮಾಡಲು ಏನೇನೋ ಸಾಹಸ ಮಾಡಲಾಗುತ್ತಿದೆ. ಹೀಗೇ ಮಾಡಲು ಹೋದ ನವ ಜೋಡಿಯೊಂದು ಜೀವ ಕಳೆದುಕೊಂಡ ಘಟನೆ ತಿ.ನರಸೀಪುರದಲ್ಲಿ ನಡೆದಿದೆ. ವರ ಚಂದ್ರು (30) ಮತ್ತು ವಧು ಶಶಿಕಲಾ (20) ಮೃತಪಟ್ಟವರು. ಕಾವೇರಿ ನದಿಯಲ್ಲಿ ನಿನ್ನೆ ಪ್ರಿ ವೆಡ್ಡಿಂಗ್ ಶೂಟ್ ನಡೆಸಲು ಈ ಜೋಡಿ ಫೋಟೋಗ್ರಾಫರ್ ಜತೆಗೆ ತೆಪ್ಪವೇರಿತ್ತು. ಮುಡುಕುತೊರೆ ನದಿ ಪಾತ್ರದಲ್ಲಿ ತೆಪ್ಪದಲ್ಲಿ ಎದ್ದು ನಿಂತು ಫೋಟೋಗೆ ಪೋಸ್ ಕೊಡುವ