ನೀಚ ತಂದೆಯೊಬ್ಬ ತನ್ನ ಕಾಮತೃಷೆ ನೀಗಿಸಿಕೊಳ್ಳಲು ಸ್ವಂತ ಮಗಳ ಮೇಲೆಯೇ ಎರಗಿರೋ ಅಮಾನವೀಯ ಘಟನೆ ನಡೆದಿದೆ. ಪಾಪಿ ತಂದೆಯನ್ನು ಉಮೇಶ್ ನಾಯಕ್ ಎಂದು ಹೇಳಲಾಗಿದೆ. ಈತನು ಮನೆಯಲ್ಲಿಯೇ ಹೆತ್ತ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆಗ ಬಾಲಕಿಯ ಕಿರುಚಾಟ ಕೇಳಿದ ಅಕ್ಕಪಕ್ಕದವರು ಬಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಸಿರಿಯೂರು ತಾಂಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.