Widgets Magazine

ಗೆಳೆಯನ ಪತ್ನಿಯ ಅಂದ ಹೊಗಳಿ ಹೆಣವಾದ ಸ್ನೇಹಿತ

ಗಾಂಧಿನಗರ| Jagadeesh| Last Modified ಗುರುವಾರ, 26 ಮಾರ್ಚ್ 2020 (15:51 IST)

ಕಂಡವರ ಪತ್ನಿಯ ಅಂದ-ಚೆಂದ ಹೊಗಳಿದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ.

ರಾಕೇಶ್ ದಾಮೋರ್ ಕೊಲೆ ಮಾಡಿದ ಆರೋಪಿಯಾದರೆ ನಿಲೇಶ್ ಮಾವಿ ಕೊಲೆಯಾದ ಯುವಕನಾಗಿದ್ದಾನೆ.

ಇವರಿಬ್ಬರೂ ಸ್ನೇಹಿತರಾಗಿದ್ದರು. ರಾಕೇಶ್ ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆತನ ಪತ್ನಿಯನ್ನು ನೋಡಿದ ನಿಲೇಶ್ ಮಾವಿ ಅವಳ ಅಂದ, ಚೆಂದದ ಬಗ್ಗೆ ಹೊಗಳಲು ಶುರುವಿಟ್ಟುಕೊಂಡಿದ್ದಾನೆ.

ಹೀಗಾಗಿ ತನ್ನ ಪತ್ನಿಯ ಮೇಲೆ ಕಣ್ಣು ಹಾಕುತ್ತಿರುವ ಗೆಳೆಯ ನಿಲೇಶ್ ಮಾವಿಯನ್ನು ಉಪಾಯವಾಗಿ ಕರೆದಕೊಂಡು ಹೋಗಿ ಕೊಲೆ ಮಾಡಿದ್ದಾನೆ ರಾಕೇಶ್ ದಾಮೋರ್.

ಗುಜರಾತ್ ನ ರಾಜಕೋಟ್ ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :