ಆ ಕಂಪನಿಯಲ್ಲಿ ಆತ ಸೆಕ್ಯೂರಿಟಿಯಾಗಿದ್ದ. ಆಕೆ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋಕೆ ಬರುತ್ತಿದ್ದಳು. ಇವರಿಬ್ಬರ ಪರಿಚಯ ಕ್ರಮೇಣ ಅನೈತಿಕ ಸಂಬಂಧಕ್ಕೆ ತಿರುಗಿದೆ. ಆಕೆಗೆ ಗಂಡನಿಗೆ ಈ ವಿಷಯ ಗೊತ್ತಾಗಿದ್ದೇ ತಡ, ಅನೈತಿಕ ಸಂಬಂಧ ಹೊಂದಿದ್ದವರು ಹೆಣವಾಗಿದ್ದಾರೆ.ಮೈಸೂರಿನಲ್ಲಿ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಸಂತೋಷ್ (34) ಹಾಗೂ ಸುಮಿತ್ರಾ (35) ಮೃತಪಟ್ಟವರು. ಅರ್ಚನಾ ಎನ್ನುವರನ್ನು ಸಂತೋಷ ಮದುವೆಯಾಗಿದ್ದರು. ಸುಮಿತ್ರಾ ಸಿದ್ದರಾಜುವಿನ ಜತೆ ಮದುವೆಮಾಡಿಕೊಂಡಿದ್ದರು.ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್, ಸುಮಿತ್ರಾ ನಡುವೆ