ಕಲಬುರಗಿ ಜಿಲ್ಲೆಯಿಂದ ಇದೂವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ ಕಳುಹಿಸಲಾದ 101 ಸ್ಯಾಂಪಲ್ಸ್ ಪರೀಕ್ಷೆಗಳಲ್ಲಿ 68 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಒಟ್ಟಾರೆ 101 ಪ್ರಕರಣಗಳ ಪೈಕಿ ಇದೂವರೆಗೆ 3ರಲ್ಲಿ (ಮೃತ ವ್ಯಕ್ತಿ ಸೇರಿದಂತೆ) ಪಾಸಿಟಿವ್ ಬಂದಿದೆ. 2 ಪ್ರಕರಣಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯಾಗಿರುವುದಿಲ್ಲ. ಇನ್ನೂ 28 ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ