ಬೆಂಗಳೂರಿಗೆ ಮತ್ತೆ ಕೊರೋನಾ ಆತಂಕ ಎದುರಾಗಿದ್ದು, ವಿದೇಶದಿಂದ ಬರುವ ಪ್ರಯಾಣಿಕರು ಕೊರೋನಾವನ್ನು ಹೊತ್ತು ತರುವ ಸಾಧ್ಯತೆ ಹೆಚ್ಚಿದೆ. ವಿದೇಶದಿಂದ ಬೆಂಗಳೂರಿಗೆ ಬಂದ 3 ಮಂದಿ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಜನವರಿ ಮಧ್ಯಭಾಗದ ವೇಳೆಗೆ ಕೊರೋನಾ 4ನೇ ಅಲೆ ಬರುವ ಸಾಧ್ಯತೆ ಇದೆ. ಈಗಾಗಲೇ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ದೇಶದಿಂದ ಭಾರತಕ್ಕೂ