ಕಾರವಾರ: ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಮಾಡುವಾಗ ದನದ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುವುದು ನಮಗೆಲ್ಲಾ ಗೊತ್ತಿದೆ. ಆದರೆ ಇಲ್ಲೊಂದು ಕುಟುಂಬ ದನಕ್ಕೆ ಚಿನ್ನದ ಹಾರ ಹಾಕಿ ಫಜೀತಿಗೆ ಸಿಲುಕಿಕೊಂಡಿತ್ತು.ಶ್ರೀಕಾಂತ್ ಹೆಗಡೆ ಎಂಬವರು ತಮ್ಮ ಮನೆಯ ದನದ ಕುತ್ತಿಗೆಗೆ ಚಿನ್ನದ ಹಾರ ಹಾಕಿದ್ದರು. ಮರುದಿನ ಹಾರ ಹುಡುಕಿದರೂ ಸಿಗಲಿಲ್ಲ. ಕೆಲವು ದಿನ ದನದ ಸೆಗಣಿ ನೋಡುವುದೇ ಕೆಲಸವಾಗಿತ್ತು. ನುಂಗಿದ್ದರೆ ಸೆಗಣಿ ಮೂಲಕ ಹಾರ ಹೊರಬಹುದೆಂದು ಕಾದರು.ಆದರೆ ಬರದೇ