ಸಂಗೀತ ಅಥವಾ ಯಾವುದೇ ಕಲೆಯೂ ಭಾಷೆ, ಗಡಿ, ಮತಪಂಥಕ್ಕೆ ಸೀಮಿತವಾದುದಲ್ಲ. ಕಲೆಗೆ ಇರುವುದು ಒಂದೇ ಭಾಷೆ ಅದು ಹೃದಯಸಂವಾದಕ್ಕೆ ಸಂಬಂಧಿಸಿದ್ದು. ಸಂಗೀತವಂತೂ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ಹೊಲದಲ್ಲಿ ನಿಂತು ಸ್ಯಾಕ್ಸೊಫೋನ್ ನುಡಿಸುತ್ತಿದ್ದಾನೆ. ಸ್ವಲ್ಪ ಹೊತ್ತಿಗೆ ಅಲ್ಲೆಲ್ಲೋ ದೂರದಲ್ಲಿ ಮೇಯಲು ಹೋಗಿದ್ದ ಹಸುಗಳು ಒಟ್ಟಾಗಿ ಬಂದು ಈತನ ಮುಂದೆ ನಿಲ್ಲುತ್ತವೆ. ಸ್ಯಾಕ್ಸೊಫೋನ್ನ ನಾದಕ್ಕೆ ಈ ಹಸುಗಳು ತಲೆದೂಗಿರುವ ಕಾರಣಕ್ಕೆ ಈ ವಿಡಿಯೋ ಇದೀಗ