ಬೆಂಗಳೂರು: ಚನ್ನಪಟ್ಟಣದ ಪ್ರತಿಷ್ಠಿತ ಕಣದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್ ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡರೇ?ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ ಧಾಟಿ ನೋಡಿದರೆ ಈಗಲೇ ಸೋಲಿನ ಹತಾಶೆಯಲ್ಲಿರುವಂತೆ ಕಂಡಿದೆ. ಎಚ್ ಎಂ ರೇವಣ್ಣ ನನ್ನ ವಿರುದ್ಧ ಸ್ಪರ್ಧಿಸಿದ್ದರಿಂದ ಹಿಂದುಳಿದ, ದಲಿತರ ಮತಗಳು ನನಗೆ ಕಡಿಮೆಯಾಗಿದೆ.ನನ್ನ ಮುಗಿಸಲು ಡಿಕೆಶಿ ಬ್ರದರ್ಸ್ ಸುಪಾರಿ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲೆಂದೇ ಜೆಡಿಎಸ್ ಶಕ್ತಿ ಮೀರಿ ಹಣದ ಹೊಳೆ ಹರಿಸಿದೆ. ರಾಜಕೀಯ ತಂತ್ರಕ್ಕೆ ನಾನು ಬಲಿಯಾಗಿದ್ದೇನೆ.