ಬೆಂಗಳೂರು : ಸಚಿವ ರಾಜಣ್ಣ ಅವರ ಸಿಎಂ ಹೇಳಿಕೆ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಪರಮೇಶ್ವರ್ ಸಿಎಂ ಆಗಬೇಕು ಎಂಬ ರಾಜಣ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಸಭೆಯಲ್ಲಿ ರಾಜಣ್ಣ ಒಳ್ಳೆ ಮಾತನಾಡಿದ್ದಾರೆ. ಅದನ್ನು ವಿಶ್ಲೇಷಣೆ ಮಾಡುವುದು ಏನಿದೆ? ನಾನು ಸಿಎಂ ಆಗಬೇಕು ಎಂಬುದರ ಸಾಧ್ಯಾಸಾಧ್ಯತೆ ನಿಮಗೇ ಗೊತ್ತಿದೆ ಎಂದರು.ಬಿಕೆ ಹರಿಪ್ರಸಾದ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ