ಬೆಂಗಳೂರು : ಗೌರಿಶಂಕರ ಟ್ರಸ್ಟ್ ವತಿಯಿಂದ ಕೆರೆಗೋಡು ಗ್ರಾಮದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಅನುಮತಿ ಕೇಳಲಾಗಿತ್ತು. ಕೆರೆಗೋಡು ಗ್ರಾಮಪಂಚಾಯಿತಿ ಅನುಮತಿಯನ್ನೂ ಸಹ ನೀಡಿತ್ತು. ಅನುಮತಿಯಲ್ಲಿ ರಾಷ್ಟ್ರ ಧ್ವಜ ಅಥವಾ ಕೇಸರಿ ಧ್ವಜ ಎಂದು ಪ್ರತ್ಯೇಕವಾಗಿ ನಮೂದಿಸಿರಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸುಳ್ಳು ದಾಖಲೆ ಸೃಷ್ಟಸಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.ಮಂಗಳವಾರ