ಆಕೆ ಎಂದಿನಂತೆ ಮನೆಯಿಂದ ಹೊರಗೆ ಬಹಿರ್ದೆಸೆಗೆ ಹೋಗಿದ್ದಾಳೆ. ಇದೇ ಸಮಯವನ್ನು ಸಾಧಿಸಿದ ಕಾಮುಕನೊಬ್ಬ ಅವಳ ಮೇಲೆ ಅತ್ಯಾಚಾರ ಮಾಡಿದ್ದಾನೆ.ಬಾಣಂತಿ ಮೇಲೆ ಅತ್ಯಾಚಾರ ಮಾಡಿರೋ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಹೆರಿಗೆಗೆ ಅಂತ ತವರ ಮನೆಗೆ ಆ ಮಹಿಳೆ ಬಂದಿದ್ದರು. ಮಗುವಾಗಿ ಎರಡು ತಿಂಗಳಾಗಿದೆ.ಈ ಬಾಣಂತಿ ಮೇಲೆ ಮಹಾಂತೇಶ್ ದೊಡ್ಡಪ್ಪ ತಳವಾರ ಎನ್ನೋ ವ್ಯಕ್ತಿ ಅತ್ಯಚಾರವೆಸಗಿದ್ದಾನೆ ಎನ್ನಲಾಗಿದೆ.ಮದುವೆಗೂ ಮೊದಲೇ ಈ ಮಹಿಳೆಯನ್ನು ಆರೋಪಿ ಚುಡಾಯಿಸುತ್ತಿದ್ದ.