ಮುಂಬರುವ 2019ರ ಚುನಾವಣೆಯಲ್ಲಿ ಹುಲಿಯನ್ನು ಎದುರಿಸಲು ಕಾಗೆ, ಮಂಗ ಮತ್ತು ನರಿಗಳು ಒಂದಾಗುತ್ತಿವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರವಾರದಲ್ಲಿ ಆಯೋಜಿಸಲಾದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಡೆ ಕಾಗೆ, ಮಂಗ ಮತ್ತು ನರಿಗಳು ಒಂದು ಕಡೆ ಸೇರಿದ್ದರೆ ಮತ್ತೊಂದು ಕಡೆ ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಹುಲಿಯನ್ನು ಗೆಲ್ಲಿಸಲು ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ. ದೇಶದ ಅಭಿವೃದ್ಧಿ ಕುಂಠಿತವಾಗಲು