ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಗೆ ಕಾಟ ಮುಂದುವರೆದಿದ್ದು, ಇಂದು ಅವರ ಮೇಲೆ ಕಾಗೆ ಹಿಕ್ಕಿ ಹಾಕಿದ ಘಟನೆ ವರದಿಯಾಗಿದೆ. ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರುವ ಮಂಜೇಶ್ವರದಲ್ಲಿ ಗೋವಿಂದ ಪೈ ಗಿಳಿವಿಂಡ್ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ತೆರೆದ ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರು ಮೇಲೆ ಕಾಗೆ ಹಿಕ್ಕಿ ಹಾಕಿದೆ. ಕಾಗೆಯ ಹಿಕ್ಕಿ ಕಂಡು ಸಿಎಂ ವಿಚಲಿತರಾದರು. ತದನಂತರ ಸಿಎಂ ಪಂಚೆ ಮೇಲೆ ಬಿದಿದ್ದ ಕಾಗೆ ಹಿಕ್ಕಿಯನ್ನು ಸಿಬ್ಬಂದಿ ವರ್ಗದವರು ಶುಚಿಗೊಳಿಸಿದ