ಬೆಂಗಳೂರು : ಕಾಂಗ್ರೆಸ್ ಮಾಡಿದ ಸಾಲವನ್ನು ತೀರಿಸುತ್ತಿರುವ ಕಾರಣ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದಿರುವ ಸಿ.ಟಿ.ರವಿ ಅವರು ಅರೆಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪೊಳ್ಳು ಮಾತುಗಳಿಂದಲೇ ಕುಖ್ಯಾತರಾಗಿರುವ ಸಿ.ಟಿ.ರವಿ, 2014ರ ವರೆಗೆ ಅಧಿಕಾರ ನಡೆಸಿದ್ದ ಸರಕಾರಗಳು ಮಾಡಿದ್ದ ಸಾಲ 54 ಲಕ್ಷ ಕೋಟಿ ರೂ. ಆದರೆ, ಮೋದಿಯವರು 7 ವರ್ಷಗಳಲ್ಲಿ ಮಾಡಿರುವ ಸಾಲ 35