ದೇಶಕ್ಕಾಗಿ ಬಿಜೆಪಿ ಮನೆಯ ನಾಯಿಯೂ ಸತ್ತಿಲ್ಲ ಎಂದಿದ್ದ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಈಗಿರೋದು ಇಟಲಿ ಕಾಂಗ್ರೆಸ್. ಇಟಲಿ ಕಾಂಗ್ರೆಸ್ ನಾಯಿಗಳೂ ಭಾರತದ ಪರವಾಗಿ ಬೊಗಳುವುದಿಲ್ಲ ಅಂತಾ ಪರೋಕ್ಷವಾಗಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ನಾಯಿ ಎಂದು ಸಿ.ಟ.ರವಿ ಸಂಬೋಧಿಸಿದ್ದಾರೆ. ಬೆಳಗಾವಿಯ ಖಾಸಗಿ ಹೊಟೇಲ್ನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ಬದಲಾವಣೆ ಆಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್ ಬೇರೆ,