ಬೆಂಗಳೂರು: ಶಬರಿಮಲೆ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿಟಿ ರವಿ ಕೇರಳ ಸರ್ಕಾರ, ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ವಿರುದ್ಧ ಕಿಡಿ ಕಾರಿದ್ದಾರೆ.ಶಬರಿಮಲೆ ಎನ್ನುವುದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ, ಕೇರಳ ಸರ್ಕಾರದಿಂದಾಗಿ ಮತ್ತು ತೃಪ್ತಿ ದೇಸಾಯಿಯಂಥವರಿಂದಾಗಿ ಇದು ಪಿಕ್ ನಿಕ್ ಸ್ಪಾಟ್ ನಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂದೂಗಳಿಗೆ ಶಬರಿಮಲೆ ಎಂದರೆ ಇರುಮುಡಿ ಕಟ್ಟು ಕಟ್ಟಿ, ಭಕ್ತಿ, ಸೇವಾ ಮನೋಭಾವದಿಂದ