ಆತ್ಮಿಯರಾದವರೇ ನನ್ನ ವಿರುದ್ಧ ಕುತಂತ್ರ ಮಾಡಿದ್ದಾರೆ. ಇದರಿಂದ ಬೇಸರವಾಗಿದ್ದರೂ ವಿಚಲಿತನಾಗಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣಮಠದಲ್ಲಿ ಇಫ್ತಾರ್ ಕೂಟ ಆಯೋಜನೆ ಕುರಿತ ಆರೋಪಗಳಿಗೆ ತಿರುಗೇಟು ನೀಡಿದ ಅವರು ಮದ್ವಸಿದ್ದಾಂತಕ್ಕೆ ವಿರೋಧವಾಗಿ ಅನೇಕ ಸಿದ್ದಾಂತಗಳಿವೆ.ಪರಧರ್ಮ ಸಹಿಷ್ಣುತೆ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ನಾನು ಮಾಡಿದ್ದರಲ್ಲಿ ಯಾವ ತಪ್ಪಿಲ್ಲ. ಹಿಂದಿನ ಸಂಪ್ರದಾಯದಂತೆಯೇ ನಡೆದುಕೊಂಡಿದ್ದೇನೆ. ಶಾಂತಿ ಸಹನೆಯಿಂದ ಆರೋಪಗಳನ್ನು ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.