ಕೊರೋನಾ ಸೋಂಕಿನಿಂದ ಗುಣಮುಖರಾದ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಕಲಬುರಗಿ ನಗರದ ಇಬ್ಬರು ಮತ್ತು ಶಹಾಬಾದ ಪಟ್ಟಣದ ಓರ್ವ ಬಾಲಕ ಸೇರಿದಂತೆ ಮೂವರು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಕಲಬುರಗಿ ನಗರದ ಖಾದ್ರಿ ಚೌಕ್ ಪ್ರದೇಶದ 34 ವರ್ಷದ ಯುವಕ (ರೋಗಿ ಸಂಖ್ಯೆ-360), ಮೋಮಿನಪುರ ಪ್ರದೇಶದ 30 ವರ್ಷದ ಯುವತಿ (ರೋಗಿ ಸಂಖ್ಯೆ-393) ಹಾಗೂ ಶಹಾಬಾದ ಪಟ್ಟಣದ ಅಪ್ಪರ ಮಡ್ಡಿ ಪ್ರದೇಶದ 16 ವರ್ಷದ ಬಾಲಕ(ರೋಗಿ ಸಂಖ್ಯೆ-361)