ಇನ್ನು ಗೃಹಿಣಿಯರಂತೂ ಪ್ರತಿನಿತ್ಯ ಅಡುಗೆ ಮಾಡಲು, ಒಗರಣೆಗೆ ಕರಿಬೇವನ್ನ ಹೆಚ್ಚೆಚ್ಚು ಬಳಸ್ತಾರೆ. ಕರಿಬೇವನ್ನ ಹೆಚ್ಚಾಗಿ ಬಳಸಿದ್ರೆ ಆರೋಗ್ಯಕ್ಕೆ ಒಳ್ಳೆದು. ಆದ್ರಲ್ಲೂ ಕಣ್ಣಿಗೆ ತುಂಬ ಒಳ್ಳೆಯದು ಹಾಗಾಗಿ ಹೆಚ್ಚಿಗೆ ಅಡುಗೆಯಲ್ಲಿ ಕರಿಬೇವು ಬಳಸ್ತಾರೆ. ಎಷ್ಟೋ ಮನೆಯಲ್ಲಿ ಕರಿಬೇವು ಇಲ್ಲ ಅಂದ್ರೆ ಅಡಿಗೆನ್ನೇ ಆಗಲ್ಲ. ಅಂತಾದ್ರಲ್ಲಿ ಈಗ ಮೂರು ಪಟ್ಟು ಕರಿಬೇವಿನ ಬೆಲೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರಂತೂ ಹೇಗಾಪ್ಪ ಅಡುಗೆ ಮಾಡೋಣ ಅಂತಾ ಅಸಾಮಾಧಾನಗೊಂಡಿದ್ದಾರೆ. ಎಲ್ಲಾದರ ಬೆಲೆ ಹೆಚ್ಚಾಳವಾಯ್ತು ಈಗ ಕರಿಬೇವಿನ ಬೆಲೆಯೂ ಹೀಗೆ ಹೆಚ್ಚಾದ್ರೆ ಹೇಗೆ ಅಂತಾ ಬೇಸರಗೊಂಡಿದ್ದಾರೆ.ಒಟ್ನಲ್ಲಿ ಈಗ ಕರಿಬೇವಿನ ಬೆಲೆ ಬಡವರ ಕೈಗೆ ಎಟುಕದ ಮಟ್ಟದಲ್ಲಿ ದುಬಾರಿಯಾಗೋಗಿದೆ.. ಮದ್ಯಮವರ್ಗದ ಜನರಂತೂ ಹೀಗೆ ಬೆಲೆ ಹೆಚ್ಚಾಳವಾದ್ರೆ ಏನುಮಾಡಣ್ಣ , ಹೇಗೆ ಅಡುಗೆ ಪದಾರ್ಥ ತೆಗೆದುಕೊಳ್ಳಣ್ಣ ಅಂತಾ ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗೋಗಿದೆ.