ಗಡಿ ಜಿಲ್ಲೆ ಬೀದರ್ ನಲ್ಲಿ ಹೋಟಲ್ ದಂಧೆ ಅಂದ್ರೆ ಅದು ಖುಲ್ಲಂ ಖುಲ್ಲಾ... ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲಾ... ಆ ಜಿಲ್ಲೆಯ ಬಹುತೇಕ ಹೋಟಲ್ ಗಳಲ್ಲಿ ಓಪನ್ ಆಗಿ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ರೇಡ್ ಮಾಡೋದು ಇರಲಿ ಇತ್ತ ನೋಡುತ್ತಲು ಇಲ್ಲಾ ಎಂದು ಗ್ರಾಹಕರು ದೂರಿದ್ದಾರೆ.ಕಳೆದೊಂದು ವರ್ಷದಿಂದ ಆಹಾರ ಪರಿಶೀಲನೆ ಮಾಡಲು ಇಲ್ಲಿನ ಆಹಾರ ಸುರಕ್ಷತಾ ಅಧಿಕಾರಿಗಳು ಮುಂದಾಗಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.