ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಸರಕಾರ ಹಲವಾರು ಬಾರಿ ಹೇಳುತ್ತದೆ. ಆದರೆ ಇಲ್ಲೊಂದು ತಂಡವೊಂದು ನಮ್ಮ ಪರಿಸರವನ್ನು ಸುಂದರವಾಗಿಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆಯಡಿ ಶಿವಮೊಗ್ಗದಿಂದ ಮಂತ್ರಾಲಯದವರೆಗೂ ಸೈಕಲ್ ಜಾಥಾ ಹಮ್ಮಿಕೊಂಡಿದೆ. ಶಿವಮೊಗ್ಗ ಮತ್ತು ಕೊಪ್ಪ ಭಾಗದ ೧೦ ಜನರ ತಂಡವೊಂದು ಮಾನ್ವಿಗೆ ಆಗಮಿಸಿ ಮಂತ್ರಾಲಯಕ್ಕೆ ಸೈಕಲ್ ಜಾಥಾ ಹಮ್ಮಿಕೊಂಡು ಮಾರ್ಗ ಮಧ್ಯೆ ಬರುವ ಊರುಗಳಲ್ಲಿ ನಿಂತು ರಕ್ತದಾನ ಹಾಗೂ ನೇತ್ರದಾನ ಮಾಡುವುದರ ಜೊತೆಗೆ