ಆತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ.ಇವತ್ತು ಭಾನುವಾರ ಆಗಿದ್ರಿಂದ ಮನೆಯಲ್ಲೇ ಇದ್ದ.ತಂದೆ ತಾಯಿ ಇಬ್ರು ಕೆಲಸಕ್ಕೆ ಹೋಗಿದ್ರು.ಆಟವಾಡ್ತಾ ಮನೆ ಪಕ್ಕದಲ್ಲೇ ಇದ್ದ ಸಿಲಿಂಡರ್ ರೀ ಫಿಲ್ಲಿಂಗ್ ಅಡ್ಡೆಗೆ ಕಾಲಿಟ್ಟಿದ್ದ.ಅಷ್ಟೇ ನೋಡ ನೋಡ್ತಿದ್ದಂತೆ ದೇಹ ಛಿದ್ರಛಿದ್ರವಾಗಿಬಿಡ್ತು.ಪೋಷಕರ ಕನಸ್ಸೆಲ್ಲ ನುಚ್ಚುನೂರಾಗಿಬಿಡ್ತು.ಮಗನನ್ನ ಕಳೆದುಕೊಂಡ ಹೆತ್ತವರ ಗೋಳಾಟ ಮನಕಲಕುವಂತಿತ್ತು