ಬೆಂಗಳೂರು : ದೇಶ ವಿರೋಧಿ ಹೇಳಿಕೆ ನೀಡಿರುವ ಡಿ.ಕೆ. ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಗುಂಡು ಹೊಡೆದು ಕೊಲ್ಲುವ ಕಾನೂನು ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈಶ್ವರಪ್ಪ ಅವರಿಗೆ ಒಂದು ವಾರ ಟೈಂ ಕೊಡ್ತೇನೆ. ಬಂದು ಗುಂಡು ಹೊಡೆಯಲಿ ಎಂದು ಸವಾಲು ಹಾಕಿದ್ದಾರೆ.ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರವಾಗಿ ನಾನು ಮಾತನಾಡಿದ್ದಕ್ಕೆ ಈಶ್ವರಪ್ಪ ಈ ರೀತಿ ಹೇಳಿರಬಹುದು ಎಂದು ನುಡಿದಿರುವ ಡಿ.ಕೆ. ಸುರೇಶ್ ಗಾಂಧೀಜಿಯವರನ್ನು ಕೊಂದ ಪಕ್ಷ ಅವರದು.