ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ರೋಹಿಣಿ ಸಿಂಧೂರಿಗೆ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರೂಪಾ ಮೌದ್ಗಿಲ್ ಅವರು, ರೋಹಿಣಿ ಸಿಂಧೂರಿ ಅವರ ಪತಿಯ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ ಎಂದರೆ ಏನು ಅರ್ಥ? ರೋಹಿಣಿ ಸಿಂಧೂರಿ ಅವರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಅವರ ಪತಿ ಹೇಳೋದು, ಫೋನ್ ಹ್ಯಾಕ್ ಮಾಡಲಾಗಿದೆ ಎಂದು. ಇದು ನಂಬುವ ಮಾತೇ?