ಬೆಂಗಳೂರು: ಸಿಡಿ ಲೇಡಿ ಪ್ರಕರಣದಲ್ಲಿ ಮಾಜಿ ಸಚಿವರೊಬ್ಬರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಮಾಜಿ ಸಚಿವ ಡಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.ಸಿಡಿ ಲೇಡಿ ಫೋನ್ ನಲ್ಲಿ ಮಾಜಿ ಸಚಿವರೊಬ್ಬರ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದ ವಿವರ ಪತ್ತೆಯಾಗಿತ್ತು. ಆ ಮಾಜಿ ಸಚಿವರು ಡಿ ಸುಧಾಕರ್ ಎಂದು ಗುಲ್ಲು ಹಬ್ಬಿತ್ತು. ಈ ಹಿನ್ನಲೆಯಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.‘ಎಸ್ ಐಟಿ ತನಿಖೆಗೆ ಕರೆದರೆ ನಾನು ಸಿದ್ಧ. ನನಗೆ ಹನಿಟ್ರ್ಯಾಪ್ ಗೊತ್ತಿಲ್ಲ.