ಅಪ್ಪ ಹಾಗೂ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನು ಮಚ್ಚಿನಿಂದ ಕೊಚ್ಚಿ ಜೋಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದಿದೆ.ಮುತ್ತಕದಹಳ್ಳಿಯ ನಾರಾಯಣರೆಡ್ಡಿ(62), ಮತ್ತವರ ಪುತ್ರ ಲಿಂಗಾರೆಡ್ಡಿ(30)ಕೊಲೆಯಾದವರು. ಕೃತ್ಯವೆಸಗಿದ ಬಾಬು ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.ಕೊಲೆಯಾದ ನಾರಾಯಣರೆಡ್ಡಿಯು ಆರೋಪಿ ಬಾಬು(35)ಗೆ ಮುತ್ತಕದಹಳ್ಳಿಯ ಸರ್ವೆ ನಂ.18 ರಲ್ಲಿ 2 ಎಕರೆ ಜಮೀನು ಮಾರಿದ್ದರು. ಆದರೆ ಅದನ್ನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಅಂದಿನಿಂದಲೂ