ಜಿಲ್ಲೆಯ ರಾಯಭಾಗ್ ತಾಲೂಕಿನ ಸಿದ್ದಾಪೂರ ಮರಡಿಯಲ್ಲಿ ದಲಿತ ಸಮುದಾಯದವರೇ ನಾಲ್ಕು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ವಿಚಿತ್ರ ಘಟನೆ ವರದಿಯಾಗಿದೆ. ಕಳೆದ ಎರಡು ತಿಂಗಳುಗಳಿಂದ ದಲಿತ ಸಮುದಾಯದವರು ನಾಲ್ಕು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಸಾರ್ವಜನಿಕ ಬಳಕೆಗಾಗಿ 1 ಗುಂಟೆ ಜಾಗ ನೀಡುವಂತೆ ಕೋರಿದಾಗ, ದಲಿತ ಕುಟುಂಬದವರು ಜಾಗ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಒಂದು ವೇಳೆ ಗ್ರಾಮಸ್ಥರು