ರಾಜಾಹುಲಿ ಬಂದ್ರು ಅಷ್ಟೇ, ಐರಾವತ ಬಂದ್ರೂ ಅಷ್ಟೇ ಗೆಲ್ಲೋದು ನಿಖಿಲ್ ಅಂತೆ...

ಮಂಡ್ಯ, ಮಂಗಳವಾರ, 19 ಮಾರ್ಚ್ 2019 (11:27 IST)

ಸುಮಲತಾ ಬೆನ್ನಿಗೆ ಸ್ಟಾರ್ ನಟರು ನಿಂತ ಹಿನ್ನೆಲೆಯಲ್ಲಿ ನಟರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಟಾರ್ ನಟರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಫೇಸ್‌ಬುಕ್‌ ವಾರ್ ಶುರುಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರು, ಯಾರೇ ಬಂದರೂ ನಾವು ಮರುಳಾಗೋಲ್ಲ. ಪೂರ್ತಿ ಸಿನಿಮಾ ಇಂಡಸ್ಟ್ರಿ ಬಂದ್ರೂ ಗೆಲ್ಲೋದೆ ನಿಖಿಲ್. ಕಾವೇರಿ ಗಲಾಟೆ ಟೈಮಲ್ಲಿ ಮಲಗಿದ್ದ ನಟರನ್ನ ಮಂಡ್ಯ ರಾಜಕೀಯಕ್ಕೆ ಎದ್ದುಬರುವಂತೆ ಮಾಡಿದವರಿಗೆ ಧನ್ಯವಾದ ಅಂತೆಲ್ಲ ಪೋಸ್ಟ್ ಹರಿಬಿಡಲಾಗಿದೆ.

ರಾಜಾಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ. ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿ. ಹೀಗಂತ ನಟ ದರ್ಶನ್, ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಲೆಕ್ಷನ್ ಎಫೆಕ್ಟ್: ಅಪಾರ ಪ್ರಮಾಣದ ಮದ್ಯ ವಶ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

news

ಸುಮಲತಾ ಪರ ಫುಲ್ ಟೈಂ ಪ್ರಚಾರ ಮಾಡುವೆ ಎಂದ ನಟ ದರ್ಶನ್

ಈ ಹಿಂದೆ ಅಂಬರೀಷ್ ಅವರ ಸೂಚನೆ‌ ಮೇರೆಗೆ ಬೇರೆಯವರ ಬಗ್ಗೆಯೂ ಹಲವಾರು ಬಾರಿ ಪ್ರಚಾರ ಮಾಡಿದ್ದಾರೆ. ಈಗ ...

news

ಅಂಬರೀಶ್ ಏನು ಅಂತ ಮಂಡ್ಯದವ್ರಿಗೆ ಗೊತ್ತು ಎಂದ ಯಶ್

ನಾನು, ದರ್ಶನ್ ಕಲಾವಿದರಾಗಿ ಕುಳಿತಿಲ್ಲ. ನಾವು ಅಂಬರೀಶ್ ಅವರ ಕುಟುಂಬದ ಮಕ್ಕಳಾಗಿ ಕುಳಿತಿದ್ದೇವೆ. ...

news

ನಟ ದರ್ಶನ್ ಎಷ್ಟು ಎಲೆಕ್ಷನ್ ಗಳಲ್ಲಿ ಪ್ರಚಾರ ಮಾಡಿದ್ದಾರೆ ಗೊತ್ತಾ?

ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ಚಿತ್ರ ನಟ ಈವರೆಗೆ ಎಷ್ಟು ಚುನಾವಣೆಗಳಲ್ಲಿ ಪ್ರಚಾರ ...