ದರ್ಶನ್ ಗಲಾಟೆಗೆ ನಾಗವರ್ಧನ್ ಎಂಟ್ರಿ

bangalore| geethanjali| Last Modified ಮಂಗಳವಾರ, 13 ಜುಲೈ 2021 (20:13 IST)
ಕಳೆದೆರಡು ದಿನದಿಂದ ಸಂಚಲನ ಮೂಡಿಸಿದ್ದ ನಟ ದರ್ಶನ್ ಗೆ 25 ಕೋಟಿ ವಂಚನೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವಂಚನೆ ಮಾಡಿದ್ದ  ಅರುಣಾ ಕುಮಾರಿಯಿಂದ ಉದ್ಯಮಿ ನಾಗವರ್ಧನ್ ಎಂಬಾತ ಕೂಡ ಮೋಸ ಹೋಗಿದ್ದಾರಂತೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸಾಹಿತಿ ನಾಗೇಂದ್ರ ಪ್ರಸಾದ್ ಹಾಗೂ ನಾಗವರ್ಧನ್ ಅರುಣಾ ಕುಮಾರಿ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದಾರೆ. ಆಕೆ ಮೊದಲು ನಂಗೆ ಪರಿಚಯವಾಗಿದ್ದು ನಂದಿತಾ ಅನ್ನೋ ಹೆಸರಿನಿಂದ. ಆದ್ರೆ ದರ್ಶನ್ ಸರ್ ಗೆ ಪರಿಚವಾಗುವಾಗ ಅರುಣಾ ಕುಮಾರಿ ಎಂದಾಗಿದೆ. ನನಗೆ ಸಿನಿಮಾ ಮಾಡಬೇಕು ಎಂಬ ಆಸೆಯಿತ್ತು. ಹೀಗಾಗಿ ಒಂದು ದೊಡ್ಡಮಟ್ಟದ ಸಿನಿಮಾ ಮಾಡ್ತೀನಿ ಅಂತ ಬಂದಾಗ ಆಕೆಯನ್ನ ನಂಬಿದ್ದೆ. ಹೈಪ್ರೊಫೈಲ್ ಥರ ನನ್ ಹತ್ರ ಬಿಲ್ಡಪ್ ಕೊಟ್ಲು. ಹೀಗಾಗಿ ನಂಬಿದ್ದೆ. ಸಿನಿಮಾ ಅಂತ ಮಾತಾಡಿ ಆಮೇಲೆ ಯಾವುದೋ ಪ್ರಾಪರ್ಟಿ ತೋರಿಸಿ ಇದನ್ನ ಸೇಲ್ ಮಾಡ್ಬೇಕು ಅಂತ ಹೇಳಿದ್ಲು. ಅದನ್ನು ಮಾಡಲು ರೆಡಿಯಾಗಿದ್ವಿ. ಆಕೆ ದೊಡ್ಡ ಮೋಸಗಾತಿ ಎಂದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :