ಮೈಸೂರು: ದಸರಾ ಮಹೋತ್ಸವದ ಕೊನೆಯ ದಿನವಾದ ನಿನ್ನೆ ಆಕರ್ಷಕ ಪಂಜಿನಕವಾಯತು ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಮೌಂಟೆಡ್ ಪೊಲೀಸ್ ಕಂಪನಿಯ ಪ್ರಧಾನ ದಳಪತಿ ಶಿವರಾಜ್ ನೇತೃತ್ವದಲ್ಲಿ ಅಶ್ವಪಡೆಯು ರಾಜ್ಯಪಾಲ ವಜೂಭಾಯಿ ರುಢಾಬಾಯಿ ವಾಲಾರಿಗೆ 21 ಕುಶಾಲತೋಪುಗಳ ರಾಷ್ಟ್ರ ಗೌರವ ಸಮರ್ಪಿಸಿತು. ಈ ಸಂದರ್ಭದಲ್ಲಿ ಗ್ಯಾಲಪರ್ ಆಗಿ ರುದ್ದಪ್ಪ, ಸುಲ್ತಾನ್ ಹೆಸರಿನ ಕುದುರೆಯೊಂದಿಗೆ ಪ್ರದರ್ಶನದಲ್ಲಿ ಭಾಗಿಯಾದರು. ನಗರಪೊಲೀಸ್ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್ ರಾಜ್ಯಪಾಲರಿಗೆ ಬೆಂಗಾವಲಿನಲ್ಲಿದ್ದರು.ಶತಮಾನಗಳ ಇತಿಹಾಸವಿರುವ ಪಂಜಿನ ಕವಾಯತು ಅಥವಾ