ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. 407ನೇ ದಸರಾಗೆ ಖ್ಯಾತ ಕವಿ ನಿಸಾರ್ ಅಹಮದ್ ಅವರು, ತಾಯಿ ಚಾಮುಂಡಿದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಿ ಮಾತನಾಡಿದ ಅವರು, ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಪದ್ಮಶ್ರೀ, ನಾಡೋಜ ಪ್ರಶಸ್ತಿಗಿಂತ ದಸರಾ ಉದ್ಘಾಟನೆ ದೊಡ್ಡದು. ವಿಜಯನಗರ ಕಾಲದಿಂದ ಮೈಸೂರು ಅರಸರವರೆಗೆ ಐತಿಹಾಸಿಕವಾಗಿ ನಡೆದಿದೆ. ದಸರಾಗೆ ಧಾರ್ಮಿಕ ಬೇರು ಇದ್ದರೂ ಸಾಂಸ್ಕೃತಿಕ ರಂಬೆ