ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ನಾಡಹಬ್ಬಕ್ಕೆ ಖ್ಯಾತ ಕವಿ ಕೆ.ಎಸ್.ನಿಸಾರ್ ಅಹಮದ್ ಚಾಲನೆ ನೀಡಲಿದ್ದಾರೆ. ಇನ್ನು ಕೆಲವೇ ದಿನಗಳು ಬಾಕಿ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ದಸರಾ ಎಂದರೆ ಪ್ರಮುಖ ಆಕರ್ಷಣೆ ಜಂಬೂಸವಾರಿ. ಹೀಗಾಗಿಯೇ ಅರ್ಜುನ ಅಂಡ್ ಟೀಂಗೆ ಚಿನ್ನದ ಅಂಬಾರಿ ತೂಕದ ಮರಳು ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ನಡೆದಿದೆ. ಸಿಡಿಮದ್ದು ಸಿಡಿಸುವಾಗ ಗಜಪಡೆ ಮತ್ತು ಅಶ್ವಪಡೆ ಬೆದರದಿರಲಿ ಎಂಬ