ಕಾಮುಕ ತಂದೆಯ ಗೆಳೆಯರ ಜೊತೆಗೂಡಿ ಕೊಂದ ಮಗಳು

ಬೆಂಗಳೂರು| Krishnaveni K| Last Modified ಮಂಗಳವಾರ, 23 ನವೆಂಬರ್ 2021 (12:08 IST)
ಬೆಂಗಳೂರು: ಪ್ರತಿನಿತ್ಯ ನೀಡುತ್ತಿದ್ದ ತಂದೆಯನ್ನು ಸ್ನೇಹಿತರ ಸಹಾಯದೊಂದಿಗೆ ಪುತ್ರಿಯೇ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.

48 ವರ್ಷದ ದೀಪಕ್ ಕುಮಾರ್ ಸಿಂಗ್ ಕೊಲೆಗೀಡಾದ ತಂದೆ. ಈತ ಪ್ರತಿನಿತ್ಯ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ತಂದೆ ಈ ಕೃತ್ಯ ನಡೆಸುತ್ತಿದ್ದ. ಈ ಬಗ್ಗೆ ತಂದೆ-ತಾಯಿಯ ನಡುವೆ ಪ್ರತಿನಿತ್ಯ ಕಲಹವಾಗುತ್ತಿತ್ತು. ಇದರಿಂದ ಬೇಸತ್ತ ಪುತ್ರಿ ತನ್ನ ಸ್ನೇಹಿತರೊಂದಿಗೆ ತಂದೆಯ ಕತೆ ಮುಗಿಸಿದ್ದಾಳೆ.


ಇದೀಗ ಪೊಲೀಸರು ಪುತ್ರಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಆಕೆಯ ನಾಲ್ವರು ಸ್ನೇಹಿತರನ್ನು ಬಂಧಿಸಿದ್ದಾರೆ. ಇನ್ನೊಬ್ಬನಿಗಾಗಿ ಶೋಧ ಮುಂದುವರಿದಿದೆ.


ಇದರಲ್ಲಿ ಇನ್ನಷ್ಟು ಓದಿ :