ಇನ್ಮುಂದೆ ಯಾರೇ ನೀರು ಕದ್ದರೂ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ. ಹೀಗಂತ ರಾಯಚೂರು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೂಚನೆ, ಎಚ್ಚರಿಕೆ ನೀಡಿದಾಗ್ಯೂ ನೀರುಗಳ್ಳರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಪೈಪ್ಗಳನ್ನು ಕಿತ್ತು ಹಾಕಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಪರಿವರ್ತಕ ತೆರವುಗೊಳಿಸಿ, ಇದಕ್ಕೂ ಸಾಧ್ಯವಾಗದಿದ್ದರೆ ಅಕ್ರಮ ನೀರಾವರಿ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ದೂರು ದಾಖಲಿಸಿ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಎಡಭಾಗ,