ಮೈಸೂರು : ಪ್ರಚಾರದ ಅವಶ್ಯಕತೆ ಇದ್ರೆ ಡಿಸಿ ಹುದ್ದೆಗೆ ರಾಜೀನಾಮೆ ನೀಡಿ ಮೈಸೂರು ಜಿಲ್ಲೆಯಲ್ಲೇ ಚುನಾವಣೆಗೆ ನಿಲ್ಲಿ ಎಂದು ಮೈಸೂರು ಡಿಸಿ ರೋಹಿಣಿ ವಿರುದ್ಧ ಸಾ.ರಾ.ಮಹೇಶ್ ಗರಂ ಆಗಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ , ತಮ್ಮ ಪ್ರಚಾರಕ್ಕಾಗಿ ಕೆಲಸ ಮಾಡಬೇಡಿಯೆಂದು ಡಿಸಿ ರೋಹಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿಮ್ಮ ಹತ್ತಿರ ಇರುವ ದಾಖಲೆಗಳನ್ನು ಬಹಿರಂಗಪಡಿಸಬಹುದು. ಆದ್ರೆ ಹೆಣ್ಣು ಮಗಳೆಂದು ಸುಮ್ಮನಿದ್ದೇನೆ. ಒಂದೊಂದು ಚುನಾವಣೆ ಐಎಎಸ್ ಗೆ ಸಮ.