ಈ ಹಿಂದೆ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದರು ಬಿ.ಶರತ್. ಪ್ರಸ್ತುತ ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡು ಒಂದು ತಿಂಗಳೂ ಕಳೆದಿಲ್ಲ. ಈ ನಡುವೆ ಶರತ್ ಅವರನ್ನು ಸರಕಾರ ದಿಢೀರ್ ವರ್ಗಾವಣೆ ಮಾಡಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.ಪ್ರಖ್ಯಾತ ಮೈಸೂರು ದಸರಾ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿಯಾಗಿ ಡಿಸಿ ಬಿ.ಶರತ್ ರನ್ನು ವರ್ಗಾವಣೆ ಮಾಡಿರುವುದಕ್ಕೆ ಶಾಸಕ ಸಾ.ರಾ.ಮಹೇಶ್ ಕಿಡಿಕಾರಿದ್ದಾರೆ.ಆಂಧ್ರ ಪ್ರದೇಶದ ಹೆಣ್ಣುಮಗಳಿಗಾಗಿ ಕನ್ನಡದ ದಲಿತ ಡಿ.ಸಿ. ಬಿ.ಶರತ್